PoemsByVolunteers

ಜಗಕೆ ಬೇಕಿರುವ ಪ್ರಜಾಪ್ರಭುತ್ವ

ಜಗಕೆ ಬೇಕಿರುವ ಪ್ರಜಾಪ್ರಭುತ್ವ ನಮ್ಮಲ್ಲೆಲ್ಲಿದೆ ?ಮನುಜರಿಗಿಂತ ಹೆಚ್ಚಿರುವ ಖಗ-ಮೃಗಗಳಿಗೆ ನಮ್ಮ ಪ್ರಜಾಪ್ರಭುತ್ವದಲ್ಲಿ ದನಿಯೆಲ್ಲಿದೆ?ಒಹ್ಹೋ..ಮೂಕ ಖಗ-ಮೃಗಗಳಿಗೆ ದನಿ ಇದ್ದರೂ, ಅದ ಆಲಿಸುವಸಹೃದಯ ನಮಗೆಲ್ಲಿದೆ? ಕಾಡುಗಳ ಕಡಿದು, ಮೃಗಗಳ ತುಳಿದು ಮೆರೆಯುವ ಮನುಜನಲ್ಲಿ ಮಾನವೀಯತೆಯೇ ಕಾಣದಾಗಿದೆ, ಸೃಷ್ಟಿಯಲ್ಲಿ ಖಗ-ಮೃಗಗಳು ನಮ್ಮಷ್ಟೇ ಹಕ್ಕುದಾರರು ಎಂಬುದು ಮರೆತೇಹೋಗಿದೆ.ಹೇ ಹೃದಯ-ಹೀನ ಮನುಜ! ಈ ಭೂಮಿಯ ಬಿಟ್ಟು ಮತ್ತೊಂದು ಸುಂದರ ಮನೆ ನಿನಗೆಲ್ಲಿದೆ!ಈ ಭೂಮಿಯ ಬಿಟ್ಟು ಮತ್ತೊಂದು ಸುಂದರ ಮನೆ ನಿನಗೆಲ್ಲಿದೆ! -ಸಿಂಹನಾದ (ಶ್ರೀನಿವಾಸ)

PoemsByVolunteers

ಪ್ರಕೃತಿ ಮತ್ತು ಮಾನವ

ಪ್ರಕೃತಿಯ ಈ ತೊಟ್ಟಿಲಲ್ಲಿ ನೆಲೆಸಿರುವ ಮಾನವನೆ,ಮರೆಯದಿರು ನೀ ಈ ಪ್ರಕೃತಿಯಿಂದಲೇ ಪಡೆದ ಜ್ಞಾನವೆಂದು,ಸ್ಪಷ್ಟವಾಗುವುದಿಲ್ಲಿ ತಾಯಿ-ಮಗುವಿನ ಸಂಬಂಧವಿದೆಯೆಂದು,ಆ ಮಾತೆಯೇ ನಿನ್ನ ಪಾಪ ಪುಣ್ಯಗಳ ಹೊರುವಳೆಂದು. ದೇಶ ದೇಶ ದೇಶ ಎಂದು ದೇಶ ಸೇವೆ ಮಾಡಿದೆ ನೀನುಸಾಹಿತ್ಯ ಕಲೆಯ ಬೆಳೆಸಿ ನೀ ಮೆರಗುಗೊಳಿಸಿದೆ ಪ್ರಕೃತಿಯನ್ನು,ಮೆಚ್ಚಿದಳಾ ಪ್ರಕೃತಿ ನಿನ್ನ ಹಾಡು ಹೊಗಳಿಕೆಗೆ,ಇದರಿಂದರಿವಾಗುವುದು ಆಕೆ ಸಹಿಸುವಳು ನಿನ್ನ ಸ್ವಾರ್ಥಪರತೆಯನ್ನು ಆಕೆಯಿಂದ ಪಡೆದೆ ನೀ ಜೀವನಕ್ಕಾಗುವಷ್ಟೆಲ್ಲವನ್ನುನೀ ಮೇಲೇರಲು ಕಡೆಗಾಣಿಸಿದೆ, ನಾಶಕ್ಕೂ ಸಿದ್ಧವಾದೆ ಆಕೆಯನ್ನುಭೂಕಂಪ, ಪ್ರಳಯ, ಅತಿವೃಷ್ಟಿಯೆಂಬ ಎಚ್ಚರಿಕೆ ಬರಲುಸಿದ್ಧನಾದೆ ನೀ ಕಡಿಯಲು ತಾಯಿ ಮಗುವಿನ… Continue reading ಪ್ರಕೃತಿ ಮತ್ತು ಮಾನವ

PoemsByVolunteers

Time for nature

Pack your bags,Let's move out,Explore the world,Play and shout. Plant more trees,Decompose some watse,Collect the vegetable peels,And make manure or paste. Save the water,Let's not waste it,Not only us,But our future should also taste. Reduce motorbike,Drive a cycle,Set your goals,Like the bullet from a riffle. Less pollution,More succes,Use eco-friendly products,And reduce some stress. Feed some… Continue reading Time for nature

PoemsByVolunteers

Time For Nature!!

By Basayya Hunasagimath, Bangalore ದರಿತ್ರೆ ಸ್ವರ್ಗ ಸಮಾನಂ| ಸಕಲ ಜೀವಕೂ ಮೋಕ್ಷಮ್||ದರಿತ್ರೆ ಸ್ವರ್ಗ ಸಮಾನಂ| ಸಕಲ ಜೀವಕೂ ಮೋಕ್ಷ ಪ್ರದಮ್||ಜನನಿ ಭಾಗ್ಯದಾಯಿನಿ|| ಮಂಗಳಂ ನಿನಗೆ ಸೌಗಂಧಿನಿ || ನಾಡ ತುಂಬ ಕಾಡು ಮೇಡ | ಹಳ್ಳ ಕೊಳ್ಳ  ಚಂದ ||ಊರ ಕೆರೆಗೆ ಹಾದಿ ಬದಿಲು | ಅಚ್ಚ ಹಸಿರು ಚಂದ ||ಆಚೆ ಈಚೆ ಹೂ ಹಣ್ಣು ಬಾಗುತ ಬಿಗುತ|ಅಲ್ಲಿ ಇಲ್ಲಿ ಹಕ್ಕಿ ಪಕ್ಕಿ ಹಾಡುತ ನಲಿಯುತಿದೆ | ಸಂತಸದ ಕವಿತೆ || ಸಂಗೀತ ಉಕೈತೆ ||ಸ್ವರ್ಗಾನೆ… Continue reading Time For Nature!!

PoemsByVolunteers

Time for Nature!!

By Chetan, Bangalore ಮತ್ತೊಮ್ಮೆ ಮಳೆ ಹೂಯ್ಯುತಿದೆ..ಕಳೆದ ಮಳೆಗಾಲದ ಗತವೈಭವವ ಮರಳಿ ತರುತ..ಇಳೆಯ ಕೊಳೆಯಲ್ಲ ಒಮ್ಮೆಲೆ ತೊಳೆಯುತ‌‌‌.. !! ಎಲ್ಲಿ ಹೋದವು ನಮ್ಮೆಲ್ಲರ ಆ ಬಾಲ್ಯದ ಮಳೆದಿನಗಳು?? ಆ ಸುರಿವ ಮಳೆಹನಿಯು ಮೈಯ ಚುಂಬಿಸುತಿರೆ ಮನದ ಭಾವ ಮಯೂರಿ ಗರಿಗೆದರಿ ಗುಡುಗು ಮಿಂಚುಗಳ ಸ್ವರ ಲಯ ತಾಳಕೆ ಮನಸೋಇಚ್ಛೆ ನರ್ತಿಸುವಾಗ ಅಪ್ಪನ ಏರುದನಿಗೆ ಬೆದರಿ ಒಡೋಡಿ ಅಮ್ಮನ ಒಡಲು ಹೊಕ್ಕಿದ್ದ ಆ ಬೆಚ್ಚನೆಯ ಕ್ಷಣಗಳು..ತಿಂದೊಡನೆ ಹಾಯ್ ಎನಿಸುತಿದ್ದ ಹಂಡೆಯೊಲೆಯ ಕೆಂಡದಲಿ ಸುಟ್ಟುತಿಂದ ಹಲಸಿನಬೀಜ‌, ಅಡುಗೆ ಮನೆಯಲಿ ಅತ್ತಿಗೆ… Continue reading Time for Nature!!

PoemsByVolunteers

Time for Nature!!

By Chetan, Bangalore ಪ್ರಕೃತಿಯ ಶಾಲೆಯಲ್ಲಿ ಪ್ರತಿಯೊಬ್ಬರೂ ವಿಧ್ಯಾರ್ಥಿಗಳೇ.. ದಿನ ದಿನವೂ ಹೊಸತೊಂದು ಪಾಠ, ನೋಡಿದಷ್ಟು ಮತ್ತೇ ಮತ್ತೇ ನೋಡಬೇಕೆನ್ನುವ ರಮ್ಯ ರಮಣೀಯ ನೋಟ.. ಮುಗಿಲು, ಬೆಟ್ಟಗುಡ್ಡ, ಜಲ ಝರಿಗಳ ಮೇಲೆ ಮೂಡಿದೆ ದೇವರ ಮುದ್ದಾದ ಅಕ್ಷರಮಾಲೆ..ಸದ್ದಿಲ್ಲದೇ ಸರ್ವರಿಗೂ ನೀಡಿದೆ ನಿಸರ್ಗದ ಮಡಿಲಿನಲ್ಲಿ ಕೂತು ಕಲಿಯುವ ಕರೆಯೋಲೆ‌‌.. ಕಲಿಯಬೇಕಿದೆ ಸಕಲ ಜೀವರಾಶಿಯೂ ವಿಶ್ವವಿದ್ಯೆಯನು ಮನಸಿಟ್ಟು, ಭೂದೇವಿಯ ಎದೆಯುಸಿರಿಗೆ ತಮ್ಮೆಲ್ಲರ ಕಿವಿಗೊಟ್ಟು! ಚೇತನ್